Shikshanaloka

#1 Eduaction Site

1. ಬ್ಯಾಂಕ್ ಎಂದರೇನು ? ಬ್ಯಾಂಕರನು ತನ್ನ ಗ್ರಾಹಕನೊಂದಿಗೆ ಹೊಂದಿರುವ ಸಾಮಾನ್ಯ ಸಂಬಂಧಗಳನ್ನು ವಿವರಿಸಿರಿ. (June 2014)

 1. ಬ್ಯಾಂಕ್ ಎಂದರೇನು ? ಬ್ಯಾಂಕರನು ತನ್ನ ಗ್ರಾಹಕನೊಂದಿಗೆ ಹೊಂದಿರುವ ಸಾಮಾನ್ಯ ಸಂಬಂಧಗಳನ್ನು ವಿವರಿಸಿರಿ. (June 2014)



ಉತ್ತರ : 'ಬ್ಯಾಂಕರ್' ಎಂದರೆ, ಬ್ಯಾಂಕ್ ಮತ್ತು ಬ್ಯಾಂಕರ್ ಎಂಬ ಪದಗಳನ್ನು ಸಮಾನ ಅರ್ಥದಲ್ಲಿ ಉಪಯೋಗಿಸ ಲಾಗುತ್ತದೆ. 'ಬ್ಯಾಂಕ್' ಎಂದರೆ ಬ್ಯಾಂಕ್ ವ್ಯವಹಾರ ಮಾಡುವ ಸಂಸ್ಥೆ ಮತ್ತು ಬ್ಯಾಂಕರ್ ಎಂದರೆ ಬ್ಯಾಂಕ್ ವ್ಯವಹಾರ ಮಾಡುವ ಎಂದುಕೊಳ್ಳಲಾಗುತ್ತದೆ. ಈ ಅಧಿನಿಯಮದ ಕಲಮು 2ರ ಪ್ರಕಾರ "ಬ್ಯಾಂಕರ್" ಎಂಬ ಪದವು ಬ್ಯಾಂಕಿಂಗ್ ವ್ಯವಹಾರ ಮಾಡುವ ಎಲ್ಲ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. ಭಾರತೀಯ ವರ್ಗಾವಣೆ ಲಿಖಿತಗಳ ಕಾನೂನು 1881ರ ಕಲಮು 4ರ ಪ್ರಕಾರ "ಬ್ಯಾಂಕರ್' ಎಂದರೆ ಬ್ಯಾಂಕಿಂಗ್ ವ್ಯವಹಾರ ಮಾಡುವ ಎಲ್ಲ ವ್ಯಕ್ತಿಗಳಿಗೆ, ವ್ಯಕ್ತಿಗಳ ಸಮುದಾಯಕ್ಕೆ ಅಥವಾ ಕಂಪನಿಗೂ ಅನ್ವಯಿಸುತ್ತದೆ. ಬ್ಯಾಂಕ್ ಮತ್ತು ಬ್ಯಾಂಕರ್ ಎಂಬ ಪದವನ್ನು ಕೆಳಗಿನವರು ಈ ರೀತಿ ವ್ಯಾಖ್ಯಾನಿಸಿರುತ್ತಾರೆ. ಅವರ ಪ್ರಕಾರ, 1. ಡಾ. ಎಚ್. ಎಲ್. ಹಾಟ್ ಅವರ ಪ್ರಕಾರ "ಚಾಲ್ತಿ ಖಾತೆಗಳ ಮೇಲೆ ತಾನು ಯಾರಿಂದ ಮತ್ತು ಯಾರ ಪರವಾಗಿ ಹಣವನ್ನು ಸ್ವೀಕರಿಸುತ್ತಾನೋ ಅಂಥವನು ತನ್ನ ಮೇಲೆ ಬರೆದ ಚಿಕ್ಕುಗಳನ್ನು ತನ್ನ ಸಾಮಾನ್ಯ ವ್ಯವಹಾರದಲ್ಲಿ ಯಾವನು ಗೌರವಿಸುತ್ತಾನೋ ಅವನೇ ಬ್ಯಾಂಕರ್. 2. ಸರ್ ಜಾನ್ ಪೆಗೆಟ್ : ಇವರ ಪ್ರಕಾರ "ಯಾವುದೇ ವ್ಯಕ್ತಿ ವ್ಯಕ್ತಿಗಳ ಸಮುದಾಯ ಅಥವಾ ಕಂಪನಿಯು 1. ಮುದ್ದತಿ ಠೇವಣೆಗಳನ್ನು ಸ್ವೀಕರಿಸುವದಿಲ್ಲದಿದ್ದರೆ, 2 ಚಾಲ್ತಿ ಠೇವಣಿಗಳನ್ನು ತೆಗೆದುಕೊಳ್ಳದಿದ್ದರೆ, 3. ಚೆಕ್ಕುಗಳನ್ನು ನೀಡದಿದ್ದರೆ ಮತ್ತು ಅವುಗಳ ಮೇಲೆ ಹಣವನ್ನು ಕೊಡದಿದ್ದರೆ. 4. ತನ್ನ ಗ್ರಾಹಕರ ಪರವಾಗಿ ಕ್ರಾಸ್ ಮಾಡಿದ ಮತ್ತು ಮಾಡದೇ ಇರುವ ಚೆಕ್ಕುಗಳನ್ನು ಜಮೆ ಮಾಡದಿದ್ದರೆ ಅಂಥವರು ಬ್ಯಾಂಕರರಾಗುವದಿಲ್ಲ. 3. ಎಚ್. ಪಿ. ಶೆಲ್ಡನ್ ಅವರ ಪ್ರಕಾರ, "ಗ್ರಾಹಕರಿಂದ ಹಣವನ್ನು ಸ್ವೀಕರಿಸುವದು ಮತ್ತು ಅವರು ಬೇಡಿದಾಗ ಅವರ ಹಣವನ್ನು ಚೆಕ್ಕುಗಳ ಮೂಲಕ ಹಿಂದಿರುಗಿಸುವದು ಇವು ಬ್ಯಾಂಕಿಂಗ್ ವ್ಯವಹಾರ ಮತ್ತು ಇನ್ನಿತರ ವ್ಯವಹಾರಗಳಲ್ಲಿನ ವಿಶಿಷ್ಟ ಅಂತರವನ್ನು ಸೂಚಿಸುತ್ತವೆ." 4. ಕಿಲ್ಲೇ ಅವರ ಪ್ರಕಾರ, "ಯಾವ ಸಂಸ್ಥೆಯು ವ್ಯಕ್ತಿಗಳಿಗೆ ಅವರ ಅವಶ್ಯಕತೆಗೆ ಅನುಗುಣವಾಗಿ ಮತ್ತು ಭದ್ರತೆಯ ಆಧಾರದ ಮೇಲೆ ಸಾಲವನ್ನು ಅಥವಾ ಮುಂಗಡವನ್ನು ನೀಡುವದೋ ಮತ್ತು ಯಾವುದಕ್ಕೆ ವ್ಯಕ್ತಿಗಳು ತಮ್ಮಲ್ಲಿ ಅನಾವಶ್ಯಕವೆಂದು ಕಂಡುಬರುವ ಹಣವನ್ನು ಒಪ್ಪಿಸುತ್ತಾರೋ, ಅಂಥ ಸಂಸ್ಥೆಯು ಬ್ಯಾಂಕು ಆಗಿರುತ್ತದೆ. ಮಹಾಲಕ್ಷ್ಮಿ ಬ್ಯಾಂಕ್ ಲಿಮಿಟೆಡ್ ವಿರುದ್ಧ ಕಂಪನಿಗಳ ರಜಿಸ್ಟಾರ್ ಪ್ರಕರಣದಲ್ಲಿ, ಬ್ಯಾಂಕಿಂಗ್ ನಿಯಂತ್ರಣ ಕಾನೂನಿನ ಕಲಮು 5ರ ಪ್ರಕಾರ, ಬೇಡಿದಾಗ ಮರುಪಾವತಿ ಮಾಡಬೇಕಾದ ಠೇವಣಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸುವ ಕಾರ್ಯವಿರದಿದ್ದರೆ ಮತ್ತು ಕೇವಲ ಸಾಲವನ್ನು ನೀಡುವ ಕಾರ್ಯವನ್ನು ಮಾತ್ರ ಇಟ್ಟುಕೊಂಡಿದ್ದರೆ, ಅಂಥ ಸಂಸ್ಥೆಯು ಬ್ಯಾಂಕಿಂಗ್ ಕಂಪನಿ ಆಗಲಾರದು ಎಂದು ತೀರ್ಪನ್ನು ಕೊಟ್ಟಿತು. ಭಾರತೀಯ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949ರ ಕಲಮು 5ರ ಪ್ರಕಾರ, ಬ್ಯಾಂಕಿಂಗ್ ಕಂಪನಿ ಎಂದರೆ 1. ಸಾರ್ವಜನಿಕರಿಂದ ಠೇವಣಿಗಳನ್ನು ಸ್ವೀಕರಿಸುವದು. 2. ಅಂಥ ಠೇವಣಿಗಳನ್ನು ಚೆಕ್ಕು, ಡ್ರಾಫ್ಟ್ ಮುಂತಾದವುಗಳ ಮೂಲಕ ಬೇಡಿದಾಗ ಅಥವಾ ನಿರ್ದಿಷ್ಟ ಅವಧಿಯ ನಂತರ ಹಿಂತಿರುಗಿಸುವದು.

3. ಠೇವಣಿಯ ಹಣವನ್ನು ಸಾಲ ಕೊಡಲು ಇಲ್ಲವೆ ಬಂಡವಾಳವಾಗಿ ಪರಿವರ್ತಿಸಲು ಉಪಯೋಗಿಸುವದು.

4.ಗ್ರಾಹಕರ ಚೆಕ್ಕುಗಳನ್ನು ಜಮಾ ಮಾಡಿಕೊಳ್ಳುವದು.

5. ಠೇವಣಿಗಳನ್ನು ಸ್ವೀಕರಿಸುವ ಮತ್ತು ಠೇವಣಿಗಳ ಹಣವನ್ನು ಸಾಲವಾಗಿ ನೀಡುವ ಸೇವೆಗಳೊಂದಿಗೆ ಇತರ ಸೇವೆಗಳನ್ನು ಮಾಡುವದು.

6. ಬ್ಯಾಂಕಿಂಗ್ ವ್ಯವಹಾರ ಮಾತ್ರ ಮಾಡುವದು.

7. 'ಬ್ಯಾಂಕ್', ಬ್ಯಾಂಕರ್ ಅಥವಾ 'ಬ್ಯಾಂಕಿಂಗ್ ಕಂಪನಿ' ಎಂಬ ಪದವನ್ನು ತನ್ನ ಹೆಸರಿನಲ್ಲಿ ಉಪಯೋಗಿಸುವದು. ಇವು ಬ್ಯಾಂಕರನ ಪ್ರಮುಖ ಲಕ್ಷಣಗಳು.

"ಗ್ರಾಹಕ" ಈ ಪದಕ್ಕೆ ಶಾಸನಬದ್ಧವಾದ ಅರ್ಥವಿವರಣೆ ಇರುವುದಿಲ್ಲ, ಬ್ಯಾಂಕಿಂಗ್ ಕಾನೂನಿನ ತಜ್ಞರ ಪ್ರಕಾರ ಮತ್ತು ನ್ಯಾಯಾಲಯಗಳ ತೀರ್ಪುಗಳ ಆಧಾರದಿಂದ 'ಗ್ರಾಹಕ' ಎಂಬ ಪದದ ಅರ್ಥವಿವರಣೆ ನೀಡಬಹುದು, ಸಾಮಾನ್ಯವಾಗಿ ಬ್ಯಾಂಕಿನಲ್ಲಿ ಖಾತೆಯಿರುವ ವ್ಯಕ್ತಿ ಅಥವಾ ಸಂಘ, ಸಂಸ್ಥೆ ಇತ್ಯಾದಿಗಳನ್ನು 'ಗ್ರಾಹಕ' ಎಂದು ಹೇಳಬಹುದು. ಅಂದರೆ ಬ್ಯಾಂಕಿನಲ್ಲಿ ವ್ಯವಹಾರದ ಮೂಲಕ ಠೇವಣಿಯಿಟ್ಟು ಖಾತೆ ತೆಗೆಯುವವರೆಲ್ಲರೂ ಗ್ರಾಹಕರು. ಆದರೆ ಕೆಲವೊಂದು ತಜ್ಞರ ಪ್ರಕಾರ, ಗ್ರಾಹಕರೆಂದರೆ ಬ್ಯಾಂಕಿನಲ್ಲಿ ಖಾತೆ ತೆಗೆದು ಅದನ್ನು ಅಲ್ಪ ಸಮಯದವರೆಗಾದರೂ ವ್ಯವಹಾರ ಮಾಡುವವರು ಗ್ರಾಹಕರು,

ಸರ್ ಜಾನ್ ಪೆಗೆಟ್‌ : ಪ್ರಕಾರ ಒಬ್ಬ ವ್ಯಕ್ತಿ ಗ್ರಾಹಕನೆನಿಸಿಕೊಳ್ಳಬೇಕಾದರೆ, ಕೆಳಗಿನ ಎರಡು ನಿಯಮಗಳನ್ನು ಪಾಲಿಸಬೇಕು

1. ಆತನ ಮತ್ತು ಬ್ಯಾಂಕಿನ ನಡುವೆ ಪರಸ್ಪರ ಸಮ್ಮತ ವ್ಯವಹಾರ ಇರಬೇಕು.

2. ಅವರಿಬ್ಬರ ನಡುವಿನ ವಹಿವಾಟು, ನಿಯಮಿತ ಕ್ರಮವಾದ ಬ್ಯಾಂಕಿಂಗ್ ವ್ಯವಹಾರಗಳಾಗಿರಬೇಕು.

ಈ ಗ್ರಾಹಕನು ಖಾತೆ ತೆರೆದು ಅಲ್ಪಕಾಲದ ವರೆಗಾದರೂ ವ್ಯವಹಾರವನ್ನು ಮುಂದುವರೆಸಿಕೊಂಡು ಹೋಗಬೇಕು.

ಪೆಗೆಟ್ ಅವರ ಪ್ರಕಾರ, ಕೇವಲ ಖಾತೆ ತೆರೆದ ಮಾತ್ರಕ್ಕೆ ಅವನು ಗ್ರಾಹಕನಾಗಲಾರ.

ಆದರೆ ಈಗಿನ ಅಭಿಪ್ರಾಯದ ಪ್ರಕಾರ ಗ್ರಾಹಕನು ಅಲ್ಪ ಸಮಯದವರೆಗೆ ಅಲ್ಲ, ಆದರೆ ನಿರಂತರವಾಗಿ ವ್ಯವಹಾರ ಮಾಡುತ್ತಿರಬೇಕು.

ಕಾನೂನಿನ ಪ್ರಕಾರ, ಬ್ಯಾಂಕಿನೊಂದಿಗೆ ನಿರಂತರ ವ್ಯವಹಾರವಿರುವವನಾಗಲಿ ಅಥವಾ ವ್ಯವಹಾರವನ್ನು ಹೊಸದಾಗಿ ಪ್ರಾರಂಭಿಸಿರುವವನಾಗಲಿ, ಬ್ಯಾಂಕಿನಲ್ಲಿ ಆತನ ಖಾತೆ ಇದ್ದರೆ ಸಾಕು, ಅವನು ಬ್ಯಾಂಕಿನ ಗ್ರಾಹಕನಾಗುತ್ತಾನೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಲಿಮಿಟೆಡ್, ಬಾಂಬೆ ವಿರುದ್ಧ ಗೋಪಿನಾಥ ನಯ್ಯರ್ ಮತ್ತು ಇತರರು

ಪ್ರಕರಣದಲ್ಲಿ ಕೇರಳ ಶ್ರೇಷ್ಠ ನ್ಯಾಯಾಲಯವು ಗ್ರಾಹಕ ಎಂಬ ಪದದ ಅರ್ಥವನ್ನು ಈ ರೀತಿ ಹೇಳಿದೆ: "ವಿಶಾಲ ಅರ್ಥದಲ್ಲಿ, ಗ್ರಾಹಕನು ತನ್ನ ವ್ಯವಹಾರದ ಸಲುವಾಗಿ ಒಂದೇ ಸ್ಥಳದಲ್ಲಿ ಅಥವಾ ಒಂದೇ ವ್ಯಕ್ತಿಯು ಆಗಾಗ್ಗೆ ಹೋಗಿಬರುವ ಅಭ್ಯಾಸ ಇಟ್ಟುಕೊಂಡಿರುವ ವ್ಯಕ್ತಿಯಾಗಿರುತ್ತಾನೆ. ಆದರೆ ಬ್ಯಾಂಕಿನ ವ್ಯವಹಾರಕ್ಕೆ ಸಂಬಂಧಪಟ್ಟು, ಬ್ಯಾಂಕರನು ತನ್ನಖಾತೆದಾರನೊಂದಿಗೆ ಹೊಂದಿರುವ ಸಂಬಂಧವು ಅಲ್ಪಾವಧಿಯಾಗಿರಬಹುದು. ಅಥವಾ ದೀರ್ಘಾವಧಿಯದಾಗಿರಬಹುದು. ದರೆ ಅದು ಮಹತ್ವದ್ದಲ್ಲ. ಆದರೆ ಬ್ಯಾಂಕರನು ಒಬ್ಬ ವಕ್ತಿಯಿಂದ ಹಣವನ್ನು ಸ್ವೀಕರಿಸಿ, ಅವನ ಹಣವು ಜಮೆಇರುವವರೆಗೆ ಅವನ ಚೆಕ್ಕುಗಳನ್ನು ಪಾವತಿ ಮಾಡುವ ಹಾಗಿದ್ದರೆ, ಆ ವ್ಯಕ್ತಿಯು ಅಥವಾ ಆ ಖಾತೆದಾರನು ಬ್ಯಾಂಕಿನ ಗ್ರಾಹಕನಾಗುತ್ತಾನೆ.

ಆದ್ದರಿಂದ ಯಾವುದೇ ವ್ಯಕ್ತಿಯನ್ನು ಬ್ಯಾಂಕಿನ ಗ್ರಾಹಕನೆಂದು ಪರಿಗಣಿಸಬೇಕಾದರೆ ಅಂಥವನು ಕೆಳಗಿನ ಲಕ್ಷಣಗಳನ್ನು ಹೊಂದಿರಬೇಕು.

1. ಬ್ಯಾಂಕಿನಲ್ಲಿ ನಗದು ಹಣ ಜಮೆ ಮಾಡಿ ಇಲ್ಲವೆ ಜಮಾ ಮಾಡಲು ಚೆಕ್ಕನ್ನು ಕೊಟ್ಟು ಚಾಲ್ತಿ ಖಾತೆ, ಉಳಿತಾಯದ ಠೇವಣಿ ಖಾತೆ ಅಥವಾ ಮುದ್ದತಿ ಠೇವಣಿ ಖಾತೆ ತೆರೆಯಬೇಕು.

2 ಅವನು ಎಷ್ಟು ಅವಧಿಯವರೆಗೆ ಬ್ಯಾಂಕಿನೊಂದಿಗೆ ವ್ಯವಹರಿಸುತ್ತಾನೆ ಎನ್ನುವದು ಮುಖ್ಯವಲ್ಲ, ಆದರೆ ಬ್ಯಾಂಕಿನಲ್ಲಿ ಅವನ ಖಾತೆಯಿರುವದು ಮುಖ್ಯ.

3. ಖಾತೆ ತೆರೆದ ತಕ್ಷಣ ಅವನು ಗ್ರಾಹಕನಾಗುತ್ತಾನೆ.

4 ಬ್ಯಾಂಕಿನೊಡನೆ, ಬ್ಯಾಂಕಿಂಗ್ ವ್ಯವಹಾರ ಮಾಡಲು ಖಾತೆ ತೆಗೆದಿರಬೇಕು.

5. ಬ್ಯಾಂಕಿನಲ್ಲಿ ಖಾತೆ ತೆಗೆಯುವ ಮೂಲಕ ಯಾವುದೇ ವ್ಯಕ್ತಿ ಬ್ಯಾಂಕಿನ ಗ್ರಾಹಕನಾಗಬಹುದು.

6 ಬ್ಯಾಂಕಿನ ಗ್ರಾಹಕನು ಒಬ್ಬ ವ್ಯಕ್ತಿಯಾಗಿರಬಹುದು ಅಥವಾ ಸಾಲಗಾರಿಕಾ ಸಂಸ್ಥೆಯಾಗಿರಬಹುದು. ಕೂಡು ಬಂಡವಾಳ ಸಂಸ್ಥೆ, ಸಹಕಾರಿ ಸಂಘ ಅಥವಾ ಇನ್ನಿತರ ಯಾವುದೇ ಸಂಘ ಸಂಸ್ಥೆಯಾಗಿರಬಹುದು. ಒಂದು ಬ್ಯಾಂಕು ಇನ್ನೊಂದು ಬ್ಯಾಂಕಿನಲ್ಲಿ ಖಾತೆ ತೆಗೆದು ಅದರ ಗ್ರಾಹಕನಾಗಬಹುದು.

ಹೀಗೆ ಗ್ರಾಹಕ ಎಂಬ ಪದವನ್ನು ಕೂಲಂಕುಷವಾಗಿ ಅರ್ಥೈಸಲಾಗಿದೆ.

ಠೇವಣಿಯ ಹಣವನ್ನು ಸಾಲ ಕೊಡಲು ಇಲ್ಲವೆ ಬಂಡವಾಳವಾಗಿ ಪರಿವರ್ತಿಸಲು ಉಪಯೋಗಿಸುವದು, ಗ್ರಾಹಕರ ಚೆಕ್ಕುಗಳನ್ನು ಜಮಾ ಮಾಡಿಕೊಳ್ಳುವದು.

5. ಠೇವಣಿಗಳನ್ನು ಸ್ವೀಕರಿಸುವ ಮತ್ತು ಠೇವಣಿಗಳ ಹಣವನ್ನು ಸಾಲವಾಗಿ ನೀಡುವ ಸೇವೆಗಳೊಂದಿಗೆ ಇತರ ಸೇವೆಗಳನ್ನು ಮಾಡುವದು.

ಬ್ಯಾಂಕಿಂಗ್ ವ್ಯವಹಾರ ಮಾತ್ರ ಮಾಡುವದು.

7. "ಬ್ಯಾಂಕ್', ಬ್ಯಾಂಕರ್ ಅಥವಾ 'ಬ್ಯಾಂಕಿಂಗ್ ಕಂಪನಿ' ಎಂಬ ಪದವನ್ನು ತನ್ನ ಹೆಸರಿನಲ್ಲಿ ಉಪಯೋಗಿಸುವದು. ಇವು ಬ್ಯಾಂಕರನ ಪ್ರಮುಖ ಲಕ್ಷಣಗಳು.

"ಗ್ರಾಹಕ" ಈ ಪದಕ್ಕೆ ಶಾಸನಬದ್ಧವಾದ ಅರ್ಥವಿವರಣೆ ಇರುವುದಿಲ್ಲ, ಬ್ಯಾಂಕಿಂಗ್ ಕಾನೂನಿನ ತಜ್ಞರ ಪ್ರಕಾರ ಮತ್ತು ನ್ಯಾಯಾಲಯಗಳ ತೀರ್ಪುಗಳ ಆಧಾರದಿಂದ 'ಗ್ರಾಪಕ' ಎಂಬ ಪದದ ಅರ್ಥವಿವರಣೆ ನೀಡಬಹುದು, ಸಾಮಾನ್ಯವಾಗಿ ಬ್ಯಾಂಕಿನಲ್ಲಿ ಖಾತೆಯಿರುವ ವ್ಯಕ್ತಿ ಅಥವಾ ಸಂಘ, ಸಂಸ್ಥೆ ಇತ್ಯಾದಿಗಳನ್ನು 'ಗ್ರಾಹಕ' ಎಂದು ಹೇಳಬಹುದು. 3. ಅಂದರೆ ಬ್ಯಾಂಕಿನಲ್ಲಿ ಪ್ರವಹಾರದ ಮೂಲಕ ಠೇವಣಿಯಿಟ್ಟು ಖಾತೆ ತೆಗೆಯುವವರೆಲ್ಲರೂ ಗ್ರಾಹಕರು, ಆದರೆ ಕೆಲವೊಂದು ತಜ್ಞರ ಪ್ರಕಾರ, ಗ್ರಾಹಕರೆಂದರೆ ಬ್ಯಾಂಕಿನಲ್ಲಿ ಖಾತೆ ತೆಗೆದು ಅದನ್ನು ಅಲ್ಪ ಸಮಯದವರೆಗಾದರೂ ವ್ಯವಹಾರ ಮಾಡುವವರು ಗ್ರಾಹಕರು.

ಸರ್ ಜಾನ್ ಪೆಗೆಟ್‌ : ಪ್ರಕಾರ ಒಬ್ಬ ವ್ಯಕ್ತಿ ಗ್ರಾಹಕನೆನಿಸಿಕೊಳ್ಳಬೇಕಾದರೆ, ಕೆಳಗಿನ ಎರಡು ನಿಯಮಗಳನ್ನು ಪಾಲಿಸಬೇಕು

1. ಅತನ ಮತ್ತು ಬ್ಯಾಂಕಿನ ನಡುವೆ ಪರಸ್ಪರ ಸಮ್ಮತ ವ್ಯವಹಾರ ಇರಬೇಕು.

2. ಅವರಿಬ್ಬರ ನಡುವಿನ ವಹಿವಾಟು, ನಿಯಮಿತ ಕ್ರಮವಾದ ಬ್ಯಾಂಕಿಂಗ್ ವ್ಯವಹಾರಗಳಾಗಿರಬೇಕು.

ಈ ಗ್ರಾಹಕನು ಖಾತೆ ತೆರೆದು ಅಲ್ಪಕಾಲದ ವರೆಗಾದರೂ ವ್ಯವಹಾರವನ್ನು ಮುಂದುವರೆಸಿಕೊಂಡು ಹೋಗಬೇಕು. ಪೆಟ್ ಅವರ ಪ್ರಕಾರ, ಕೇವಲ ಖಾತೆ ತೆರೆದ ಮಾತ್ರಕ್ಕೆ ಅವನು ಗ್ರಾಹಕನಾಗಲಾರ.

ಆದರೆ ಈಗಿನ ಅಭಿಪ್ರಾಯದ ಪ್ರಕಾರ ಗ್ರಾಹಕನು ಅಲ್ಪ ಸಮಯದವರೆಗೆ ಅಲ್ಲ, ಅದರೆ ನಿರಂತರವಾಗಿ ವ್ಯವಹಾರ ಮಾಡುತ್ತಿರಬೇಕು.

ಕಾನೂನಿನ ಪ್ರಕಾರ, ಬ್ಯಾಂಕಿನೊಂದಿಗೆ ನಿರಂತರ ವ್ಯವಹಾರವಿರುವವನಾಗಲಿ ಅಥವಾ ಅಥವಾ ವ್ಯವಹಾರವನ್ನು ವ್ಯವಹಾರವನ್ನು ಹೊಸದಾಗಿ ಪ್ರಾರಂಭಿಸಿರುವವನಾಗಲಿ, ಬ್ಯಾಂಕಿನಲ್ಲಿ ಆತನ ಖಾತೆ ಇದ್ದರೆ ಸಾಕು, ಅವನು ಅವನು ಬ್ಯಾಂಕಿನ ಗ್ರಾಹಕನಾಗುತ್ತಾನೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಲಿಮಿಟೆಡ್, ಬಾಂಬೆ ವಿರುದ್ಧ ಗೋಪಿನಾಥ ನಯ್ಯರ್ ಮತ್ತು ಇತರರು ಪ್ರಕರಣದಲ್ಲಿ ಕೇರಳ ನ್ಯಾಯಾಲಯವು ಗ್ರಾಹಕ ಎಂಬ ಪದದ ಅರ್ಥವನ್ನು ಈ ರೀತಿ ಹೇಳಿದ "ವಿಶಾಲ ಅರ್ಥದಲ್ಲಿ ಗ್ರಾಹಕನು ತನ್ನ ವ್ಯವಹಾರದ ಸಲುವಾಗಿ ಒಂದೇ ಸ್ಥಳದಲ್ಲಿ ಅಥವಾ ಒಂದೇ ವ್ಯಕ್ತಿಯು ಆಗಾಗ್ಗೆ ಹೋಗಿ ಬರುವ ಅಭ್ಯಾಸ ಇಟ್ಟುಕೊಂಡಿರುವ ವ್ಯಕ್ತಿಯಾಗಿರುತ್ತಾನೆ. ಆದರೆ ಬ್ಯಾಂಕಿನ ವ್ಯವಹಾರಕ್ಕೆ ಸಂಬಂಧಪಟ್ಟು, ಬ್ಯಾಂಕರನು ತನ್ನ శదారనుందిగ ముందిరన కంబంధను అల్భావధియాగింబముదు. అథవా ఛాపధీయదాగిరబకుడు. ಆದರೆ ಅದು ಮಹತ್ವದ್ದಲ್ಲ, ಆದರೆ words ದಿ ಒಬ್ಬ ವಕ್ತಿಯಿಂದ ಹಣವನ್ನು ಸ್ವೀಕರಿಸಿ, ಅವನ ಹಣವು ಜಮೆ ಇರುವವರೆಗೆ ಅವನ ಚೆಕ್ಕುಗಳನ್ನು ಪಾವತಿ ಮಾಡುವ ಹಾಗಿದ್ದರೆ, ವ್ಯಕ್ತಿಯು ಅಥವಾ ಖಾತೆದಾರನು ಬ್ಯಾಂಕಿನ ಆದ್ದರಿಂದ ಯಾವುದೇ ವ್ಯಕ್ತಿಯನ್ನು ಬ್ಯಾಂಕಿನ ಗ್ರಾಹಕನೆಂದು ಪರಿಗಣಿಸಬೇಕಾದರೆ ಅಂಥವನು ಕೆಳಗಿನ ಕ್ಷಣಗಳನ್ನು ಹೊಂದಿರಬೇಕು.

  1. ಬ್ಯಾಂಕಿನಲ್ಲಿ ನಗದು ಹಣ ಜಮೆ ಮಾಡಿ ಇಲ್ಲವೆ ಜವ ಜಮಾ ಮಾಡಲು ಚೆಕ್ಕನ್ನು ಕೊಟ್ಟು ಚಾಲ್ತಿ ಖಾತೆ, ಉಳಿತಾಯದ ಠೇವಣಿ ಖಾತೆ ಅಥವಾ ಮುದ್ದತೆ ರೇವಣಿ ಖಾತೆ ತರೆಯಬೇಕು.
  2. ಅವನು ಎಷ್ಟು ಅವಧಿಯವರೆಗೆ ಬ್ಯಾಂಕಿನಲ್ಲಿ ವ್ಯವಹರಿಸುತ್ತಾನೆ ಎಂಬುದು ಮುಖ್ಯವಲ್ಲ. ಆದರೆ ಬ್ಯಾಂಕಿನಲ್ಲಿ ಅವನ ಖಾತೆ ಇರುವುದು ಮುಖ್ಯ.
  3. ಖಾತೆ ತೆರೆದ ತಕ್ಷಣ ಅವನು ಗ್ರಾಹಕನಾಗುತ್ತಾನೆ
  4.  ಬ್ಯಾಂಕಿನೊಡನೆ ಬ್ಯಾಂಕಿಂಗ್ ವ್ಯವಹಾರ ಮಾಡಲು ಕಾತೆ ತೆಗೆದಿರಬೇಕು 
  5.  ಬ್ಯಾಂಕಿನಲ್ಲಿ ಖಾತೆ ತೆಗೆಯುವ ಮೂಲಕ ಯಾವುದೇ ವ್ಯಕ್ತಿ ಬ್ಯಾಂಕಿನ ಗ್ರಾಹಕನಾಗಬಹುದು.
  6.  ಬ್ಯಾಂಕಿನ ಗ್ರಾಹಕನು ಒಬ್ಬ ವ್ಯಕ್ತಿಯಾಗಿರಬಹುದು ಅಥವಾ ಸಾಲಗಾರಿಕಾ ಸಂಸ್ಥೆ ಆಗಿರಬಹುದು  ಕೂಡು ಬಂಡವಾಳ ಸಂಸ್ಥೆ  ಸರ್ಕಾರಿ ಸಂಘ ಸಂಸ್ಥೆ ಅಥವಾ ಇನ್ನಿತರ ಯಾವುದೇ ಸಂಘ ಸಂಸ್ಥೆ ಆಗಿರಬಹುದು. ಒಂದು ಬ್ಯಾಂಕು ಇನ್ನೊಂದು ಬ್ಯಾಂಕಿನಲ್ಲಿ  ಖಾತೆ ತೆಗೆದು ಅದರ ಗ್ರಾಹಕನಾಗಬಹುದು.
 ಗ್ರಾಹಕ ಎಂಬ ಪದವನ್ನು ಕುಲಂಕುಶವಾಗಿ ಅರ್ಥೈಸಲಾಗಿದೆ.

 ಬ್ಯಾಂಕರ್ ನ ಮತ್ತು ಗ್ರಾಹಕರು ನಡುವಿನ ಸಾಮಾನ್ಯ ಸಂಬಂಧ (General Relationship of Banker and Customer):

ಗ್ರಾಹಕನು ಬ್ಯಾಂಕಿನಲ್ಲಿ ಖಾತೆ ತೆರೆದ ನಂತರ ಅವನ ಮತ್ತು ಬ್ಯಾಂಕಿನ ನಡುವೆ ಶಾಸನಬದ್ಧ ಸಂಬಂಧವೇರ್ಪಡು ತ್ತದೆ. ಇದನ್ನು ಎರಡು ರೀತಿಯಲ್ಲಿ ವಿಂಗಡಿಸಬಹುದು.

1. ಸಾಮಾನ್ಯ ಸಂಬಂಧ ಮತ್ತು

2. ವಿಶೇಷ ಸಂಬಂಧ

ಇಲ್ಲಿ ಸಾಮಾನ್ಯ ಸಂಬಂಧವನ್ನು ಮಾತ್ರ ವಿವರಿಸಲಾಗಿದೆ.

ಸಾಮಾನ್ಯ ಸಂಬಂಧ :

ಇದರಲ್ಲಿ ಎರಡು ವಿಧಗಳು

1. ಮೂಲ ಸಾಮಾನ್ಯ ಸಂಬಂಧ ಅಥವಾ ಸಾಲಗಾರ ಸಾಲಿಗೆ ಸಂಬಂಧ ಮತ್ತು

2. ಪೂರಕ ಸಂಬಂಧ

1. ಮೂಲ ಸಾಮಾನ್ಯ ಸಂಬಂಧ ಅಥವಾ ಸಾಲಗಾರ ಸಾಲಿಗ ಸಂಬಂಧ   (Debtor-Creditor Relationship):

ಈ ಮೂಲ ಸಾಮಾನ್ಯ ಸಂಬಂಧವು, ಯಾವುದೇ ವ್ಯಕ್ತಿ ಬ್ಯಾಂಕಿನಲ್ಲಿ ಖಾತೆ ತೆರೆದಾಕ್ಷಣ ಪ್ರಾರಂಭವಾಗುತ್ತದೆ.

ಈ ಸಂಬಂಧದ ಸ್ವರೂಪ :

ಬ್ಯಾಂಕ‌ರ್ ಮತ್ತು ಗ್ರಾಹಕರ ನಡುವಿನ ಸಂಬಂಧವು ಮುಖ್ಯವಾಗಿ ಸಾಲಗಾರ ಸಾಲಿಗೆ ಸ್ವರೂಪದ್ದಾಗಿದೆ. ಗ್ರಾಹಕನು ಬ್ಯಾಂಕಿನಲ್ಲಿ ಖಾತೆಯನ್ನು ತೆರೆದರೆ, ಕಾನೂನಿನ ದೃಷ್ಟಿಯಲ್ಲಿ ಬ್ಯಾಂಕರನು ಸಾಲಗಾರನು ಮತ್ತು ಗ್ರಾಹಕನು ಸಾಲಿಗನಾಗುತ್ತಾನೆ. ಗ್ರಾಹಕನು ಬ್ಯಾಂಕಿನಲ್ಲಿ ತನ್ನ ಖಾತೆಯಲ್ಲಿ ಒಮ್ಮೆ ಇಟ್ಟ ಹಣವು ಕೇವಲ ಠೇವಣಿಯಾಗಿರದೆ, ಅದು ಬ್ಯಾಂಕಿಗೆ ಕೊಟ್ಟ ಸಾಲವೆಂದು ಪರಿಗಣಿಸಲ್ಪಡುತ್ತದೆ. ಆದರೆ ಗ್ರಾಹಕನ ಹಣಕ್ಕೆ ಬ್ಯಾಂಕರನು ನ್ಯಾಸಧಾರಿಯಾಗುವದಿಲ್ಲ.

ಶಾಂತಿ ಪ್ರಸಾದ ವಿರುದ್ಧ ಡೈರೆಕ್ಟರ್ ಆಫ್ ಎನ್‌ಪೋರ್ಸ್‌ಮೆಂಟ್ ಪ್ರಕರಣದಲ್ಲಿ ಭಾರತದ ವರಿಷ್ಠ ನ್ಯಾಯಾಲಯವು ಈ ರೀತಿ ಅಭಿಪ್ರಾಯ ಪಟ್ಟಿದೆ: "ಗ್ರಾಹಕನು ಬ್ಯಾಂಕಿನಲ್ಲಿ ಠೇವಣಿ ಇಟ್ಟಾಗ, ಗ್ರಾಹಕ ಮತ್ತು ಬ್ಯಾಂಕರ್ ಇವರ ನಡುವಿನ ಸಂಬಂಧವು ಸಾಲಗಾರ ಮತ್ತು ಸಾಲಿಗರ ನಡುವಿನ ಸಂಬಂಧವಾಗಿದೆಯೇ ಹೊರತು, ಫಲಾನುಭವಿ ಮತ್ತು ನ್ಯಾಸಧಾರಿಯ ಸಂಬಂಧವಾಗಿರುವದಿಲ್ಲ". ಇದೇ ಅಭಿಪ್ರಾಯವನ್ನು ಅನೇಕ ಪ್ರಕರಣದಲ್ಲಿ ಕೊಡಲಾಗಿದೆ. ಒಟ್ಟಾರೆ, ಬ್ಯಾಂಕರ್ ಮತ್ತು ಗ್ರಾಹಕ ಇವರ ನಡುವಿನ ಸಂಬಂಧದಲ್ಲಿ ಕೆಳಗೆ ಕೊಟ್ಟ ಅಂಶಗಳನ್ನು ಪರಿಗಣಿಸಬೇಕು:

1. ಬ್ಯಾಂಕರನು ಗ್ರಾಹಕನ ಹಣದ ನಿಕ್ಷೇಪಿತನಲ್ಲ.

2. ಬ್ಯಾಂಕರನು ಗ್ರಾಹಕನ ಹಣದ ನ್ಯಾಸಧಾರಿ ಆಗಿರುವದಿಲ್ಲ.

3. ಬ್ಯಾಂಕರನು ಗ್ರಾಹಕನ ಹಣದ ಮುತಾಲಿಕನೂ ಆಗಿರುವದಿಲ್ಲ.

4. ಬ್ಯಾಂಕರನು ಗ್ರಾಹಕನ ಹಣದ ಮಟ್ಟಿಗೆ ಮಾತ್ರ ಸಾಲಗಾರನಾಗುತ್ತಾನೆ.

ಬ್ಯಾಂಕರ್ ಮತ್ತು ಗ್ರಾಹಕರ ಸಂಬಂಧದ ಲಕ್ಷಣಗಳು :

1. ಬ್ಯಾಂಕರನು ಸಾಲಗಾರನಾಗಿ ವಿಶೇಷ ಲಕ್ಷಣಗಳನ್ನು ಹೊಂದಿರುತ್ತಾನೆ.

(i) ಇವರಿಬ್ಬರ ನಡುವಿನ ಸಂಬಂಧವು ಒಪ್ಪಂದದ ಮೂಲಕ ಏರ್ಪಡುತ್ತದೆ. ಆದ್ದರಿಂದ ಅದು ಈ ಒಪ್ಪಂದದ ಷರತ್ತುಗಳಿಗೆ ಅನುಗುಣವಾಗಿ ಕಾರ್ಯರೂಪದಲ್ಲಿ ಬರುತ್ತದೆ.

(ii) ಬ್ಯಾಂಕರನು ಗ್ರಾಹಕನ ಠೇವಣಿ ಹಣದ ನ್ಯಾಸಧಾರಿ, ನಿಯೋಗಿ ಅಥವಾ ನಿಕ್ಷೇಪಿತ ಅಲ್ಲ.

(iii) ಬ್ಯಾಂಕರನು ಗ್ರಾಹಕನ ಠೇವಣಿ ಹಣವನ್ನು ಹಿಂತಿರುಗಿಸುವ ಕೇವಲ ಸಾಲಗಾರನಾಗಿರುತ್ತಾನೆ.

(iv) ಬ್ಯಾಂಕರನು ಗೌರವಾನ್ವಿತ ಸಾಲಗಾರನಾಗಿರುತ್ತಾನೆ. ಏಕೆಂದರೆ ಗ್ರಾಹಕನು ತನ್ನ ಖಾತೆಯಲ್ಲಿಟ್ಟ ಹಣವು ಸಾಲವಲ್ಲದೆ ಠೇವಣಿಯಾಗಿರುತ್ತದೆ. ಮತ್ತು ಸಾಲಿಗನಾದ ಗ್ರಾಹಕನೇ ಸ್ವತಃ ಸಾಲಗಾರನಾದ ಬ್ಯಾಂಕರನ ಬಳಿಗೆ ಹೋಗಿ ತನ್ನ ಹಣವನ್ನು ಕೊಡುತ್ತಾನೆ. ಗ್ರಾಹಕನು ಬ್ಯಾಂಕರನ ಯಾವ ಶಾಖೆಯಲ್ಲಿ ಹಣವನ್ನು ಠೇವಣಿಯಾಗಿಟ್ಟಿರುವನೋ ಅದೇ ಶಾಖೆಗೆ ಹೋಗಿ ಹಣ ಪಡೆಯಬೇಕಾಗುತ್ತದೆ ಮತ್ತು ಬ್ಯಾಂಕಿನ ಅವಧಿಯಲ್ಲಿ ಮಾತ್ರ ವ್ಯವಹಾರ ಮಾಡಬೇಕಾಗುತ್ತದೆ.

2. ಗ್ರಾಹಕನು ಬ್ಯಾಂಕಿನ ಸಾಮಾನ್ಯ ಸಾಲಿಗನಾಗಿರುತ್ತಾನೆ. ಅಂದರೆ ಬ್ಯಾಂಕಿನ ಆಸ್ತಿಯ ಮೇಲೆ ಠೇವಣಿ ಇಟ್ಟ ಗ್ರಾಹಕನಿಗೆ ಯಾವ ವಿಶಿಷ್ಟ ಒತ್ತೆ ಹಕ್ಕು ಇರುವದಿಲ್ಲ. ಆದ್ದರಿಂದ ಗ್ರಾಹಕನು ಬ್ಯಾಂಕಿನ ಸಾಮಾನ್ಯ ಸಾಲಿಗನಾಗಿದ್ದಾನೆ.

3. ಗ್ರಾಹಕನು ಬೇಡಿದಾಗ ಬ್ಯಾಂಕು ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಗ್ರಾಹಕನ ಖಾತೆಯಲ್ಲಿ ಹಣವಿರುವ ವರೆಗೆ ಅವನ ಚೆಕ್ಕುಗಳನ್ನು ಗೌರವಿಸುವದು ಬ್ಯಾಂಕರನ ಕರ್ತವ್ಯ.

4. ಬ್ಯಾಂಕಿನಿಂದ ಹಣ ಪಡೆಯಲು ಗ್ರಾಹಕನು ಬೇಡಿಕೆ ಮಂಡಿಸಬೇಕು. ಹೀಗೆ ಗ್ರಾಹಕನು ತಾನು ಇಟ್ಟ ಹಣವನ್ನು ವಾಪಸ್ ಪಡೆಯಲು ಬೇಡಿಕೆಯನ್ನು ಮಂಡಿಸುವದು ಬ್ಯಾಂಕರ್ ಮತ್ತು ಗ್ರಾಹಕ ಸಂಬಂಧದ ಪ್ರಮುಖ ಲಕ್ಷಣ.

5. ಗ್ರಾಹಕನು ಬ್ಯಾಂಕಿನಲ್ಲಿಯ ತನ್ನ ಖಾತೆಯಿಂದ ಹಣ ಹಿಂತಿರುಗಿ ಪಡೆಯಬೇಕಾದರೆ ನಿರ್ದಿಷ್ಟ ಮುದ್ರಿತ ನಮೂನೆಗಳಲ್ಲಿನ ಚೆಕ್ಕುಗಳ ಮೂಲಕ ಮಾತ್ರ ಸಾಧ್ಯ.

6. ತನ್ನ ಖಾತೆ ಯಾವ ಶಾಖೆಯಲ್ಲಿರುತ್ತದೆಯೋ ಅದೇ ಶಾಖೆಯಿಂದ ಮಾತ್ರ ಹಣವನ್ನು ಮರಳಿ ಬೇಕಾಗುತ್ತದೆ.

7. ಕೆಲಸದ ದಿನ ಮತ್ತು ವ್ಯವಹಾರದ ಸಮಯದಲ್ಲಿ ಮಾತ್ರ ಗ್ರಾಹಕನು ಹಣವನ್ನು ಪಡೆಯಬೇಕಾಗುತ್ತದೆ.

8. ಬ್ಯಾಂಕು ಒಂದು ವೇಳೆ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿದರೆ, ಅಥವಾ ಬ್ಯಾಂಕು ವಿಸರ್ಜಿಸಲ್ಪಟ್ಟರೆ, ಗ್ರಾಹಕನ ಖಾತೆಗೆ ಜಮೆ ಇರುವ ಹಣವನ್ನು ಬ್ಯಾಂಕು ಚೆಕ್ಕುಗಳನ್ನು ಪಡೆಯದೇ ಪಾವತಿ ಮಾಡಬೇಕು. ಆದರೆ ಗ್ರಾಹಕನಿಗೆ ಮಾಡಬೇಕಾದ ಸಂದಾಯವು ವಿಸರ್ಜನೆಯ ವಿಧಿ ನಿಯಮಗಳನ್ನು ಅವಲಂಬಿಸಿದೆ.

2. ಪೂರಕ ಸಂಬಂಧ  (Subsidiary Relationship):

ಬ್ಯಾಂಕರ್ ಮತ್ತು ಗ್ರಾಹಕರ ನಡುವಿನ ಪೂರಕ ಸಂಬಂಧದಲ್ಲಿ ಮೂರು ವಿಧಗಳು :

1. ನಿಕ್ಷೇಪಿತ-ನಿಕ್ಷೇಪಕ ಸಂಬಂಧ

2. ನ್ಯಾಸಧಾರಿಯ ಸಂಬಂಧ ಮತ್ತು

3. ಕಾರ್ಯಭಾರಿಯ ಸಂಬಂಧ 

1. ನಿಕ್ಷೇಪಿತ - ನಿಕ್ಷೇಪಕ ಸಂಬಂಧ (Bale - Bailor Relationship) ಗ್ರಾಹಕನು ತನ್ನಲ್ಲಿರುವ ಮೌಲ್ಯವರ್ಧಿತ ವಸ್ತುಗಳನ್ನು ಬ್ಯಾಂಕರನಲ್ಲಿ ಸುರಕ್ಷತೆಯ ದೃಷ್ಟಿಯಿಂದ ಇಟ್ಟಾಗ, ಅಂಥ ಸಂದರ್ಭದಲ್ಲಿ ಬ್ಯಾಂಕರನು ನಿಕ್ಷೇಪಿತನೂ ಮತ್ತು ಗ್ರಾಹಕನು ನಿಕ್ಷೇಪಕನೂ ಆಗುತ್ತಾರೆ.

ನಿಕ್ಷೇಪಿತನಾದ ಬ್ಯಾಂಕರನು, ಗ್ರಾಹಕನು ಕೊಟ್ಟ ವಸ್ತುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕಲ್ಲದೆ, ಗ್ರಾಹಕನು ಅವುಗಳನ್ನು ಕೇಳಿದಾಗ ಹಿಂದಿರುಗಿಸಬೇಕಾಗುತ್ತದೆ. ಅದೇ ರೀತಿಯ ಬೇರೆ ವಸ್ತುಗಳನ್ನು ಹಿಂದಿರುಗಿಸಲು ಬರುವದಿಲ್ಲ. ಅವುಗಳನ್ನೇ ಹಿಂದಿರುಗಿಸಬೇಕಾಗುತ್ತದೆ. ಈ ನಿಕ್ಷೇಪಣೆ ಕೇವಲ ಚರಾಸ್ತಿಗಳಿಗೆ ಅನ್ವಯಿಸುತ್ತದೆ. ಹಣವು ಚರಾಸ್ತಿಯಲ್ಲವಾದ್ದರಿಂದ ಅದನ್ನು ಇಟ್ಟಾಗ ಬ್ಯಾಂಕು ನಿಕ್ಷೇಪಿತವಾಗುವದಿಲ್ಲ.

ಒಂದು ವೇಳೆ ಬ್ಯಾಂಕರನ ಅಲಕ್ಷತನದಿಂದ ಗ್ರಾಹಕನಿಟ್ಟ ವಸ್ತುಗಳಿಗೆ ನಷ್ಟವಾದರೆ, ಆ ನಷ್ಟವನ್ನು ಬ್ಯಾಂಕರನು ತುಂಬಿ ಕೊಡಬೇಕಾಗುತ್ತದೆ. ಆದರೆ ಅಂಥ ನಷ್ಟವು ಬ್ಯಾಂಕರನ ನಿಯಂತ್ರಣ ಮೀರಿ ಆಗಿದ್ದರೆ ಅದಕ್ಕೆ ಅವನು ಹೊಣೆಯಲ್ಲ. ಉದಾ : ಬೆಂಕಿ, ದರೋಡೆ, ಮುಂತಾದವುಗಳು.

2. A wo (Trustee and Beneficiary): ಯಾಗಿಯೂ ಕಾರ್ಯ ನಿರ್ವಹಿಸುತ್ತವೆ. ಬ್ಯಾಂಕರನು ನ್ಯಾಸಧಾರಿಯಾಗಿ ಸಮರ್ಪಕವಾಗಿ ಕೆಲಸ ಮಾಡಬಲ್ಲನು. ನ್ಯಾಸಧಾರಿಯಾಗಿ ಬ್ಯಾಂಕರನು ನಿರ್ವಹಿಸಬೇಕಾದ ಕರ್ತವ್ಯಗಳು ಯಾವುವೆಂದರೆ,

೩) ನ್ಯಾಸದ ಕರಾರಿನ ಪ್ರಕಾರ ತನಗೆ ಒಪ್ಪಿಸಿದ ಆಸ್ತಿಯನ್ನು ಅಥವಾ ಹಣವನ್ನು ಉಪಯೋಗಿಸುವದು ನ್ಯಾಸಧಾರಿ ಬ್ಯಾಂಕರನ ಕರ್ತವ್ಯ.

b) ಬ್ಯಾಂಕರನು ನ್ಯಾಸದ ಆಸ್ತಿಯ ಅಥವಾ ಹಣದ ಪೂರ್ತಿ ಲೆಕ್ಕವನ್ನು ಫಲಾನುಭವಿಯಾದ ಗ್ರಾಹಕನಿಗೆ ಒಪ್ಪಿಸಬೇಕಾಗುತ್ತದೆ.

3. ಯಜಮಾನ ಮಾಲೀಕ ಸಂಬಂಧ  (Principal and Agent Relationship)

ಸಂಬಂಧವು ಬ್ಯಾಂಕ್ ಮತ್ತು ಗ್ರಾಹಕನ ನಡುವೆ ಇರುವದಿಲ್ಲ, ಏಕೆಂದರೆ ಬ್ಯಾಂಕರನು ಗ್ರಾಹಕನ ಅಭಿಲಾಷೆಯಂತೆ ಕಾರ್ಯ

c) ನ್ಯಾಸದ ಅಸ್ತಿಯಿಂದ ಗಳಿಸಿದ ಲಾಭವನ್ನು ಬ್ಯಾಂಕರನು ಫಲಾನುಭವಿ ಗ್ರಾಹಕನಿಗೆ ಕೊಡಬೇಕಾಗುತ್ತದೆ.

ನಿರ್ವಹಿಸುವದಿಲ್ಲ, ಮೂಲತಃ ಇವರಿಬ್ಬರ ಸಂಬಂಧವು ಸಾಲಗಾರ ಸಾಲಿಗನ ಸಂಬಂಧವಾಗಿದೆ. ಆದರೂ ಸಹ ಇಂದಿನ ಬ್ಯಾಂಕುಗಳು ಗ್ರಾಹಕರ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತವೆ. ಮತ್ತು ಕಾರ್ಯಭಾರಿಯಾಗಿ ಸೇವೆ ಸಲ್ಲಿಸುತ್ತವೆ. ಉದಾ:

1) ತನ್ನ ಗ್ರಾಹಕನ ಪರವಾಗಿ ಬ್ಯಾಂಕರನು ಬಂಡವಾಳ ಪತ್ರಗಳನ್ನು ಖರೀದಿಸುತ್ತಾನೆ ಅಥವಾ ಮಾರುತ್ತಾನೆ.

ii) ಗ್ರಾಹಕನು ಚೆಕ್ಕುಗಳನ್ನು ಜಮಾ ಮಾಡಲು ಕಳಿಸಿದಾಗ, ಅವುಗಳನ್ನು ಜಮಾ ಮಾಡುತ್ತಾನೆ.

1) ಗ್ರಾಹಕನ ನಿರ್ದೇಶನದಂತೆ ಅವನು ಕೊಡಬೇಕಾದ ಬಾಡಿಗೆ, ವಿಮಾ ಕಂತು, ಮುಂ.ಗಳನ್ನು ಪಾವತಿ ಮಾಡುತ್ತಾನೆ.

ಹೀಗೆ ಬ್ಯಾಂಕರನು ತನ್ನ ಗ್ರಾಹಕರ ಕಾರ್ಯಭಾರಿಯಾಗಿ ಅನೇಕ ವಿಧದ ಪೂರಕ ಸೇವೆ ಸಲ್ಲಿಸುತ್ತಾನೆ. ಹೀಗೆ ಗ್ರಾಹಕ ಮತ್ತು ಬ್ಯಾಂಕರನ ನಡುವೆ ಸಾಮಾನ್ಯ ಸಂಬಂಧವೇರ್ಪಟ್ಟಿರುತ್ತದೆ.


No comments:

Post a Comment